Description
ಭಾರತ, ಭಾರತದ ಸಂಸ್ಕೃತಿ-ಪರಂಪರೆ-ಸಮಾಜಜೀವನ; ಭಿನ್ನತೆ, ವೈಪರೀತ್ಯಗಳ ನಡುವೆಯೂ ಎದ್ದುಕಾಣುವ ಏಕತೆ; ಮೆಲ್ನೋಟಕ್ಕೆ ಆಗೀಗ ಕಾಣುವ ಕೋಭೆ, ತಲ್ಲಣಗಳು, ಅರಾಜಕತೆ, ಅಭದ್ರತೆಗಳ ನಡುವೆಯೂ ಅನೂಚಾನವಾಗಿ ಅವಿಚ್ಛಿನ್ನವಾಗಿ ಉಳಿದುಕೊಂಡು ಬಂದಿರುವ ಇಲ್ಲಿಯ ಜೀವನಪದ್ಧತಿ-ಧರ್ಮ – ಇವೆಲ್ಲವೂ ಸದಾ ಬೆರಗುಮೂಡಿಸುತ್ತವೆ. ರಾಗದ್ವೇಷರಹಿತ ಮನಸ್ಸುಗಳಿಗೆ ಭಾರತವೆಂದರೆ ನಿಗೂಢ- ಅಚ್ಚರಿಯ ದೇಶ. ಹಾಗಾಗಿ ಶತಶತಮಾನಗಳಿಂದಲೂ ಭಾರತವನ್ನು ನೋಡುವ, ಶೋಧಿಸುವ ಉದ್ದೇಶದಿಂದ ಬರುವವರು ಅಸಂಖ್ಯ. ತಾವಿದ್ದಲ್ಲಿಂದಲೇ ಭಾರತವನ್ನು ಕುರಿತು ಕೇಳುವ, ಓದುವ, ತಿಳಿಯುವ ಆಸಕ್ತರಿಗೂ ಲೆಕ್ಕವಿಲ್ಲ; ದೇಶ-ಭಾಷೆಗಳ ಗಡಿಯೂ ಇಲ್ಲ. ಇನ್ನು, ಈ ಕಾರಣಗಳ ಹೊರತಾಗಿ, ಕೇವಲ ಇಲ್ಲಿನ ಸಂಪತ್ತಿನ ಲೂಟಿಗಾಗಿ ಮತ್ತು ತಮ್ಮ ಮತಗಳ ವಿಸ್ತಾರಕ್ಕಾಗಿ ಬಂದವರೂ ಸಾಕಷ್ಟು ಇದ್ದಾರೆ
ಈ ಕೃತಿ, ಅನ್ಯಾನ್ಯ ಕಾರಣಗಳಿಂದಾಗಿ ಭಾರತಕ್ಕೆ ಬಂದುಹೋದವರು, ಭಾರತವನ್ನು ಕುರಿತು ತಿಳಿದು ಬರೆದವರು, ಭಾರತೀಯ ಪರಂಪರೆಗೆ ಮಣಿದು ಕೃತಜ್ಞತೆ ಸಲ್ಲಿಸಿದವರು – ಹೀಗೆ ಹಲವರ ಅಭಿಪ್ರಾಯಗಳನ್ನು ದಾಖಲಿಸಿದೆ. ಈ ಅಭಿಪ್ರಾಯಗಳು ನಮಗೆ, ನಮ್ಮ ಸುದೀರ್ಘ ಪರಂಪರೆ, ನಾಗರಿಕತೆ, ಇತಿಹಾಸ, ಸಂಸ್ಕೃತಿಗಳನ್ನು ಕುರಿತು ನಮ್ಮ ಇತಿಹಾಸ ಪುಸ್ತಕಗಳು ಪಾಠ್ಯಗಳು ಹೇಳದ ಅಪೂರ್ವ ಮಾಹಿತಿಯನ್ನು ನೀಡುತ್ತವೆ.
Publisher : Rashtrotanna ; Paperback
Reviews
There are no reviews yet.