Description
ಅಗಸ್ತ್ಯರು ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪ್ರಭಾವೀ ಮಹರ್ಷಿಗಳಲ್ಲಿ ಒಬ್ಬರು. ರಾಮಾಯಣ ಹಾಗೂ ಮಹಾಭಾರತವೆರಡೂ ಮಹಾಕಾವ್ಯಗಳಲ್ಲಿ ಬರುವ ಮತ್ತು ಕತೆಯ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುವ ಅಗಸ್ತ್ಯರು ಕೆಲಸ ಮಾಡದ ಕ್ಷೇತ್ರವೇ ಇಲ್ಲ ಎನ್ನಬಹುದು. ದಕ್ಷಿಣ ಭಾರತದಲ್ಲಂತೂ ಅಗಸ್ತ್ಯರ ಪ್ರಭಾವ ಅಪರಿಮಿತ. ಅಂಥ ಮಹತ್ವದ ಐತಿಹಾಸಿಕ ವ್ಯಕ್ತಿಯ ಸಂಪೂರ್ಣ ಪರಿಚಯವನ್ನು ಮಾಡಿಕೊಡುವ ಅನನ್ಯ ಕೃತಿ ಇದಾಗಿದೆ. ಇದರಲ್ಲಿ ಅಗಸ್ತ್ಯರ ಬಗ್ಗೆ ಇರುವ ಪೌರಾಣಿಕ ಉಲ್ಲೇಖಗಳು, ಅವರು ಕೃಷಿ ಮಾಡಿದ ಕ್ಷೇತ್ರಗಳ ವಿವರ, ಭಾರತದ ವಿವಿಧ ಜ್ಞಾನಕ್ಷೇತ್ರಗಳ ಮೇಲೆ ಅಗಸ್ತ್ಯರ ಪ್ರಭಾವ, ಅಗಸ್ತ್ಯರ ಶಿಷ್ಯಪರಂಪರೆ, ಇತಿಹಾಸದಲ್ಲಿ ಅವರ ಮಹತ್ವ, ಮತ್ತು ಇಂದು ಚಾಲ್ತಿಯಲ್ಲಿರುವ ಅಗಸ್ತ್ಯ ಸಂಬಂಧೀ ಸ್ಥಳಗಳು – ಈ ಎಲ್ಲ ವಿಷಯಗಳ ವಿವರವಾದ ಮಾಹಿತಿ ನೀಡಲಾಗಿದೆ. ಭಾರತೀಯ ಋಷಿಮುನಿಗಳ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಇದೊಂದು ಆಕರ ಗ್ರಂಥವಾಗಿದೆ.
Publisher : Ayodhya ; Paperback ; Pages : 237


Reviews
There are no reviews yet.